Home
ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಆಧಿನಿಯಮ-2011 (Karnataka Guarantee of Services Act-2011)
- Yelandur is a small Town in Chamarajanagara District.
- The Town Panchayat (T.P) Yelandur was Constituted on 1996.
- It is Situated between Chamarajanagara and Kollegal National Highway No 209 at a Distance of 20 Km from District Head Quarters Chamarajanagara.
- The Town has the famous Sri Gowrishankar (Bale mantap) and Sri Varahaswamy Temples.
- The Sri Biligiriranga Hills (B.R Hills) stands at 24 Kms from the Town.
- The Sri Nanjundeshwara Temple Nanjanagud Popular as "Dakshina Kashi" is 60 Kms far from the Town.
- The Town has a Population of 8585 as per Census 2001.
- The T.P has 11 Wards and equal number of Councilors and 3 Numbers of Nominee Councilors.
ಯಳಂದೂರಿನ ಬಗ್ಗೆ:
- ಯಳಂದೂರು ಪಟ್ಟಣವು ಚಾಮರಾಜನಗರ ಜೆಲ್ಲೆಯಲ್ಲಿ ಚಿಕ್ಕ ಪಟ್ಟಣವಾಗಿರುತ್ತದೆ.
- ಯಳಂದೂರು ಪಟ್ಟಣ ಪಂಚಾಯಿತಿಯು 1996 ರಲ್ಲಿ ಸ್ಥಾಪನೆಯಾಗಿರುತ್ತದೆ.
- ಯಳಂದೂರು ಪಟ್ಟಣವು ಚಾಮರಾಜನಗರ ಹಾಗೂ ಕೊಳ್ಳೇಗಾಲ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಜಿಲ್ಲಾ ಕೇಂದ್ರ ಚಾಮರಾಜನಗರ ದಿಂದ 20 ಕಿ.ಮೀ ಅಂತರದಲ್ಲಿರುತ್ತದೆ.
- ಯಳಂದೂರು ಪಟ್ಟಣದಲ್ಲಿ ಪುರಾಣ ಪ್ರಸಿದ್ದವಾದ ಶ್ರೀ ಗೌರಿಶಂಕರ (ಬಳೇ ಮಂಟಪ) ಹಾಗೂ ಶ್ರೀ ವರಹಾಸ್ವಾಮಿ ದೇವಾಲಯಗಳಿರುತ್ತವೆ.
- ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿ.ಆರ್. ಹಿಲ್ಸ್) ವು ಯಳಂದೂರು ಪಟ್ಟಣ ದಿಂದ 24 ಕಿ.ಮೀ ಅಂತರದಲ್ಲಿದೆ.
- "ದಕ್ಷಿಣ ಕಾಶಿ" ಎಂದು ಪ್ರಸಿದ್ದವಾದ ನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯವು ಯಳಂದೂರು ಪಟ್ಟಣದಿಂದ ಸುಮಾರು 60 ಕಿ.ಮೀ ಅಂತರದಲ್ಲಿದೆ.
- 2001 ರ ಜನಗಣತಿಯಂತೆ ಯಳಂದೂರು ಪಟ್ಟಣವು 8585 ಜನಸಂಖ್ಯೆಯನ್ನು ಹೊಂದಿರುತ್ತದೆ.
- ಯಳಂದೂರು ಪಟ್ಟಣವು 11 ವಾರ್ಡುಗಳನ್ನು ಹೊಂದಿದ್ದು, 11 ಚುನಾಯಿತ ಸದಸ್ಯರು ಹಾಗೂ 3 ನಾಮ ನಿರ್ಧೇಶಿತ ಸದಸ್ಯರಿರುತ್ತಾರೆ.
ಗಣಕೀಕರಣ ಯೋಜನೆಗಳು:-
ಜನನ-ಮರಣ ದಾಖಲಾತಿಯ ಗಣಕೀಕರಣ:- ಪಟ್ಟಣ ಪಂಚಾಯಿತಿಯಲ್ಲಿ ಲಭ್ಯವಿರುವ 1990 ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಅಧೀಕೃತ ಅಂತರ್ಜಾಲ www.yelandurtown.gov.in ನ ಮೂಲಕ ಪರಿಶೀಲಿಸಬಹುದು.
ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಘಟಕ:- ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಘಟಕವು ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಪತ್ರ, ದೂರವಾಣಿ ಹಾಗೂ ಈ- ಮೇಲ್ ಮುಖಾಂತರ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖೈ:08226-240226, ಅಧೀಕೃತ ಅಂತರ್ಜಾಲ www.yelandurtown.gov.in
ಆಸ್ತಿ ತೆರಿಗೆ ಗಣಕೀಕರಣ:- ಆಸ್ತಿ ತೆರಿಗೆ ಗಣಕೀಕರಣ ಯೋಜನೆಯು ಪ್ರಗತಿಯಲ್ಲಿದ್ದು 11 ವಾರ್ಡುಗಳ ಎಲ್ಲಾ ಆಸ್ತಿಗಳನ್ನು ಸರ್ವೆ ಮಾಡಲಾಗಿದ್ದು, ಡಾಟಾವನ್ನು ಪೌರಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆ ವೆಬ್ ಸೈಟ್:- ಯಳಂದೂರು ಪಟ್ಟಣದ ಅಧೀಕೃತ ಅಂತರ್ಜಾಲ www.yelandurtown.gov.in ಕೆ.ಎಂ.ಆರ್.ಪಿ ಯೋಜನೆಯಡಿ ಸ್ಥಾಪನೆಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಲೆಕ್ಕ ಪದ್ಧತಿ:- ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ನಿಧಿಯಾಧಾರಿತ ಲೆಕ್ಕ ಪದ್ಧತಿ (ಖರ್ಚು ವೆಚ್ಚಗಳು) ಯನ್ನು ಡಿಸೆಂಬರ್-2011 ರ ವರೆಗೆ ಕಾಲೋಚಿತಗೊಳಿಸಲಾಗಿದೆ ಹಾಗೂ 2010-11 ನೇ ಸಾಲಿನ ಎ.ಪಿ.ಆರ್. ಮುಕ್ತಾಯಗೊಂಡಿದ್ದು, ಸದರಿ ಮಾಹಿತಿಯನ್ನು ವೆಬ್ ಸೈಟ್ www.yelandurtown.gov.in ಮೂಲಕ ಪಡೆಯಬಹುದು.
Click Here for Yelandur Town Water Supply Nodal Officer Details
This Page is Maintained by Sri Vijaya Chieff Officer -II
Last Updated on 02-01-2012

